Category Archives: Subhashita

ಸತ್ಯಂ ಮಾತಾ ಪಿತಾ ಜ್ಞಾನಂ

ಸತ್ಯಂ ಮಾತಾ ಪಿತಾ ಜ್ಞಾನಂ ಧರ್ಮೋ ಭ್ರಾತಾ ದಯಾ ಸಖಾ |
ಶಾಂತಿಃ ಪತ್ನೀ ಕ್ಷಮಾ ಪುತ್ರ: ಷಡೇತೇ ಮಮ ಬಾಂಧವಾ: ||

ಸತ್ಯವು ನನ್ನ ತಾಯಿ, ಜ್ಞಾನವು ನನ್ನ ತಂದೆ, ಧರ್ಮವು ನನ್ನ ಒಡಹುಟ್ಟಿದ ಸಹೋದರ, ದಯೆಯು ನನ್ನ ಗೆಳೆಯ, ಶಾಂತಿಯು ನನ್ನ ಹೆಂಡತಿ, ಕ್ಷಮೆಯು ನನ್ನ ಮಗ – ನನ್ನ ಆರು ಬಂಧುಗಳು ಇವರೇ.

ಅಮಂತ್ರಮಕ್ಷರಂ ನಾಸ್ತಿ ನಾಸ್ತಿ

ಅಮಂತ್ರಮಕ್ಷರಂ ನಾಸ್ತಿ ನಾಸ್ತಿ ಮೂಲಮನೌಷಧಂ |
ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭ: ||

ಮಂತ್ರವಾಗಲು ಯೋಗ್ಯವಲ್ಲದ ಯಾವುದೇ ಅಕ್ಷರವಿಲ್ಲ. ಔಷಧೀಯ ಗುಣವಿಲ್ಲದ ಯಾವುದೇ ಮೂಲಿಕೆಯಿಲ್ಲ. ಯಾವ ಕೆಲಸಕ್ಕೂ ಯೋಗ್ಯನಲ್ಲದ ಮನುಷ್ಯನು ಇಲ್ಲವೇ ಇಲ್ಲ. ಆದರೆ ಇವುಗಳ ಯೋಗ್ಯತೆಯನ್ನು ಅರಿತು ಉಪಯೋಗಿಸಬಲ್ಲವರು ತುಂಬ ಕಡಿಮೆ

ನ ದೇವಾ ದಂಡಮಾದಾಯ

ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್ |
ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂವಿಭಜಂತಿ ತಮ್ ||

ದೇವತೆಗಳು ಕೈಯಲ್ಲಿ ಕೋಲು ಹಿಡಿದು ಗೋಪಾಲನಂತೆ ಮನುಷ್ಯರನ್ನು ಕಾಪಾಡುವುದಿಲ್ಲ. ಯಾರನ್ನು ರಕ್ಷಿಸಲು ಬಯಸುತ್ತಾರೋ, ಅವನಿಗೆ ಒಳ್ಳೆಯ ಬುದ್ಧಿಯನ್ನು ಕೊಡುತ್ತಾರೆ, ಅಷ್ಟೇ. (ಆ ಬುದ್ಧಿಯೇ ಅವನನ್ನು ರಕ್ಷಿಸುತ್ತದೆ).

ಯಥಾ ಖರ: ಚನ್ದನಭಾರವಾಹೀ

ಯಥಾ ಖರ: ಚನ್ದನಭಾರವಾಹೀ ಭಾರಸ್ಯ ವೇತ್ತಾ ನ ತು ಚನ್ದನಸ್ಯ |
ಏವಂ ಹಿ ಶಾಸ್ತ್ರಾಣಿ ಬಹೂನ್ಯಧೀತ್ಯ ಅರ್ಥೇಷು ಮೂಢಾ: ಖರವದ್ ವಹಂತಿ ||

ಹೇಗೆ ಚಂದನವನ್ನು ಬೆನ್ನ ಮೇಲೆ ಹೊತ್ತ ಕತ್ತೆಯು ಹೊರೆಯ ಭಾರವನ್ನಷ್ಟೇ ತಿಳಿಯುವುದು, ಆ ಹೊರೆಯ ಬೆಲೆಯನ್ನಲ್ಲವೋ, ಹಾಗೆ ಅನೇಕ ಶಾಸ್ತ್ರಗಳನ್ನು ಕಲಿತು ಅವುಗಳ ಅರ್ಥವನ್ನರಿಯದ ಮೂರ್ಖರು ಕತ್ತೆಯಂತೆ ಭಾರವನ್ನಷ್ಟೇ ಹೊರುತ್ತಾರೆ.

ವಿಷಾದಪ್ಯಮೃತಂ ಗ್ರಾಹ್ಯಂ

ವಿಷಾದಪ್ಯಮೃತಂ ಗ್ರಾಹ್ಯಂ ಬಾಲಾದಪಿ ಸುಭಾಷಿತಮ್ |
ಅಮಿತ್ರಾದಪಿ ಸದ್ವೃತ್ತಂ ಅಮೇಧ್ಯಾದಪಿ ಕಾಂಚನಮ್ ||

ಅಮೃತವನ್ನು ವಿಷದೊಂದಿಗಿದ್ದರೂ ಪಡೆಯಬೇಕು. ಚಿಕ್ಕ ಮಕ್ಕಳಿಂದಲೂ ಒಳ್ಳೆಯ ಮಾತನ್ನು ಗ್ರಹಿಸಬೇಕು. ಶತ್ರುವಿನಿಂದಲೂ ಒಳ್ಳೆಯ ನಡತೆಯನ್ನು ಕಲಿಯಬೇಕು. ಮಲದಿಂದಲೂ ಚಿನ್ನವನ್ನು ತೆಗೆದುಕೊಳ್ಳಬೇಕು.

ವ್ಯಾಯಾಮಾತ್ ಲಭತೇ

ವ್ಯಾಯಾಮಾತ್ ಲಭತೇ ಸ್ವಾಸ್ಥ್ಯಂ ದೀರ್ಘಾಯುಷ್ಯಂ ಬಲಂ ಸುಖಮ್ |
ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ ||

ವ್ಯಾಯಾಮದಿಂದ ಆರೋಗ್ಯವೂ, ದೀರ್ಘಾಯುಸ್ಸೂ, ಬಲವೂ, ಸುಖವೂ ದೊರೆಯುತ್ತದೆ. ಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ. ಆರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ.

ಉತ್ಸಾಹೋ ಬಲವಾನಾರ್ಯ

ಉತ್ಸಾಹೋ ಬಲವಾನಾರ್ಯ ನಾಸ್ತ್ಯುತ್ಸಾಹಾತ್ಪರಂ ಬಲಮ್ |
ಸೋತ್ಸಾಹಸ್ಯ ಚ ಲೋಕೇಷು ನ ಕಿಂಚಿದಪಿ ದುರ್ಲಭಮ್ ||

ಉತ್ಸಾಹವು ತುಂಬ ಬಲಿಷ್ಠವಾದದ್ದು. ಉತ್ಸಾಹಕ್ಕಿಂತ ಪ್ರಬಲವಾದದ್ದು ಯಾವುದೂ ಇಲ್ಲ. ಉತ್ಸಾಹವಂತನಾದ ಮನುಷ್ಯನಿಗೆ ಅಸಾಧ್ಯವಾದದ್ದು ಈ ಲೋಕದಲ್ಲಿ ಯಾವುದೂ ಇಲ್ಲ.

ಏಕಂ ವಿಷರಸಂ ಹಂತಿ

ಏಕಂ ವಿಷರಸಂ ಹಂತಿ ಶಸ್ತ್ರೇಣೈಕಶ್ಚ ವಧ್ಯತೇ |
ಸರಾಷ್ಟ್ರಂ ಸಪ್ರಜಂ ಹಂತಿ ರಾಜಾನಂ ಮಂತ್ರವಿಪ್ಲವ: ||

ವಿಷರಸವು ಒಬ್ಬನನ್ನು ಕೊಲ್ಲುತ್ತದೆ, ಆಯುಧವು ಕೂಡ ಒಬ್ಬನನ್ನೇ ಕೊಲ್ಲುತ್ತದೆ, ಆದರೆ ಕೆಟ್ಟ ಮಂತ್ರಣೆ ಮತ್ತು ನಿರ್ಧಾರಗಳು ದೇಶ ಮತ್ತು ಪ್ರಜೆಗಳ ಸಹಿತವಾಗಿ ರಾಜನನ್ನು ಪೂರ್ಣವಾಗಿ ನಾಶಮಾಡುತ್ತವೆ.

ಅಶ್ವಸ್ಯ ಭೂಷಣಂ ವೇಗೋ

ಅಶ್ವಸ್ಯ ಭೂಷಣಂ ವೇಗೋ ಮತ್ತಂ ಸ್ಯಾದ್ ಗಜಭೂಷಣಂ |
ಚಾತುರ್ಯಮ್ ಭೂಷಣಂ ನಾರ್ಯಾ ಉದ್ಯೋಗೋ ನರಭೂಷಣಂ ||

ಕುದುರೆಗೆ ವೇಗವೇ ಭೂಷಣ, ಆನೆಗೆ ಮದವೇ ಭೂಷಣ, ಹೆಣ್ಣಿಗೆ ಚಾತುರ್ಯವೇ ಭೂಷಣ, ಉದ್ಯೋಗವು ಮನುಷ್ಯನಿಗೆ ಭೂಷಣ.

ವಿದ್ಯಾ ವಿವಾದಾಯ ಧನಂ

ವಿದ್ಯಾ ವಿವಾದಾಯ ಧನಂ ಮದಾಯ ಶಕ್ತಿ: ಪರೇಷಾಂ ಪರಿಪೀಡನಾಯ |
ಖಲಸ್ಯ ಸಾಧೋರ್ವಿಪರೀತಮೇತಜ್ಜ್ಞಾನಾಯ ದಾನಾಯ ಚ ರಕ್ಷಣಾಯ ||

ದುಷ್ಟರ ಬಳಿ ಇರುವ ವಿದ್ಯೆಯು ಕಲಹಕ್ಕೆ ಕಾರಣವಾಗುತ್ತದೆ, ಧನವು ಅಹಂಕಾರಕ್ಕೆ ಕಾರಣವಾಗುತ್ತದೆ, ಬಲವು ಪರರ ಪೀಡೆಗೆ ಕಾರಣವಾಗುತ್ತದೆ. ಸಜ್ಜನರ ವಿಷಯದಲ್ಲಿಯಾದರೋ ವಿದ್ಯೆಯು ಜ್ಞಾನಕ್ಕೂ, ಧನವು ದಾನಕ್ಕೂ, ಶಕ್ತಿಯು ದುರ್ಬಲರ ಮತ್ತು ಧರ್ಮದ ರಕ್ಷಣೆಗೂ ಕಾರಣವಾಗುತ್ತದೆ.