Category Archives: Quotes

ಶೂನ್ಯದ ಉಲ್ಲೇಖ

ಶೂನ್ಯದ ಉಲ್ಲೇಖವು ಅಥರ್ವವೇದದಲ್ಲಿ (೧೪.೨೨.೨೩) ಕಂಡುಬರುತ್ತದೆ.

‘ಪ್ಲಾಸ್ಟಿಕ್ ಸರ್ಜರಿ’

ಇಂದು ‘ಪ್ಲಾಸ್ಟಿಕ್ ಸರ್ಜರಿ’ ಎಂದು ಪ್ರಖ್ಯಾತವಾಗಿರುವ ಶಸ್ತ್ರಚಿಕಿತ್ಸಾಪ್ರಕಾರವು ಆಚಾರ್ಯ ಸುಶ್ರುತನಿಂದ ಕ್ರಿ.ಶ ಎರಡನೆಯ ಶತಮಾನದಲ್ಲಿಯೇ ಮಾಡಲ್ಪಟ್ಟಿತ್ತು.

ಸೂರ್ಯನನ್ನು ಸುತ್ತಿ ಬರಲು ಭೂಮಿಗೆ ಬೇಕಾದ ಸಮಯ

ಸೂರ್ಯನ ಸುತ್ತ ಒಂದು ಸುತ್ತು ಬರಲು ಭೂಮಿಗೆ ಬೇಕಾದ ಸಮಯವು ಭಾಸ್ಕರಾಚಾರ್ಯದಿಂದ ಕ್ರಿ.ಶ ಐದನೆಯ ಶತಮಾನದಲ್ಲಿ ಕಂಡುಹಿಡಿಯಲ್ಪಟ್ಟಿತು.

ಭಾರತೀಯರ ಲೋಹಜ್ಞಾನ

ವೈದಿಕಸಾಹಿತ್ಯದಲ್ಲಿ ಅನೇಕ ಲೋಹಗಲ ಉಲ್ಲೇಖವು ಕಂಡುಬರುತ್ತದೆ. ಮೆಹರೌಲಿಯಲ್ಲಿ ಇರುವ ಲೋಹದ ಕಂಬವು (ಕ್ರಿ.ಶ ಐದನೆಯ ಶತಮಾನಕ್ಕಿಂತ ಮೊದಲು ನಿರ್ಮಿತವಾದದ್ದು) ಭಾರತೀಯರ ಲೋಹದ ಕೆಲಸದ ಕೌಶಲಕ್ಕೆ ಸಾಕ್ಷಿಯಾಗಿದೆ.

ದಶಮಾನಪದ್ಧತಿಯ ಆವಿಷ್ಕಾರ

ದಶಮಾನಪದ್ಧತಿಯ ಮೊದಲನೆಯ ಉಲ್ಲೇಖವು ಅಗ್ನಿಪುರಾಣದಲ್ಲಿ ಕಂಡುಬರುತ್ತದೆ (ಕ್ರಿ.ಶ ೪೦೦)

‘ಪೈ’ ಸಂಖ್ಯೆಯ ನಿರ್ಣಯ

ಇಂದು ಗಣಿತಶಾಸ್ತ್ರದಲ್ಲಿ ‘ಪೈ’ ಎಂದು ಪ್ರಸಿದ್ಧವಾಗಿರುವ ಸಂಖ್ಯೆಯ ನಿರ್ಣಯವು ಆಚಾರ್ಯ ಬೋಧಾಯನರಿಂದ ಕ್ರಿ.ಶ ಆರನೆಯ ಶತಮಾನದಲ್ಲಿ ಮಾಡಲ್ಪಟ್ಟಿತು.

ಬೆಳಕಿನ ವೇಗ

ಋಗ್ವೇದದಲ್ಲಿ (ಕ್ರಿ.ಪೂ ೪೫೦೦) ಬೆಳಕಿನ ವೇಗದ ಉಲ್ಲೇಖವಿದೆ. ಸಾಯಣನ ಭಾಷ್ಯದಲ್ಲಿಯೂ ಸಹ (ಕ್ರಿ.ಶ ೧೩೧೫-೧೩೮೭) ಶ್ಲೋಕರೂಪದಲ್ಲಿ ಇದರ ವಿವರಣೆಯಿದೆ.

ಭಾರತದೇಶೇ ತಾಲಪತ್ರಾಣಿ

ಭಾರತದೇಶದಲ್ಲಿ ಸುಮಾರು ೫೦,೦೦,೦೦೦ ತಾಡಪತ್ರಗಳಿವೆ. ಅವುಗಳಲ್ಲಿ ಸುಮಾರು ೭೫ ಪ್ರತಿಶತ ಸಂಸ್ಕೃತಕ್ಕೆ ಸಂಬಂಧಪಟ್ಟವೇ ಆಗಿವೆ.

ಸಂಸ್ಕೃತಭಾಷೆಯ ಮೊದಲ ಜ್ಞಾನಪೀಠ ಪ್ರಶಸ್ತಿ

ಸಂಸ್ಕೃತಭಾಷೆಯ ಮೊದಲ ಜ್ಞಾನಪೀಠ ಪ್ರಶಸ್ತಿಯು ೨೦೦೬ನೇ ವರ್ಷದಲ್ಲಿ ಡಾ.ಸತ್ಯವ್ರತಶಾಸ್ತ್ರಿಯವರಿಗೆ ನೀಡಲ್ಪಟ್ಟಿತು.

ಸಂಸ್ಕೃತವಾರ್ತೆಗಳು

ಪ್ರತಿದಿನವೂ ಆಕಾಶವಾಣಿಯಲ್ಲಿ ಎರಡು ಬಾರಿ (ಬೆಳಿಗ್ಗೆ ೬.೫೫ರಿಂದ ೭.೦೦, ಮತ್ತು ಸಂಜೆ ೬.೧೦ರಿಂದ ೬.೧೫) ಮತ್ತು ದೂರದರ್ಶನದಲ್ಲಿ ಒಮ್ಮೆ (ಬೆಳಿಗ್ಗೆ ೬.೫೫ ರಿಂದ ೭.೦೦) ಸಂಸ್ಕೃತವಾರ್ತೆಗಳು ಪ್ರಸಾರವಾಗುತ್ತವೆ.