Monthly Archives: May 2012

ಸ್ನಾತಕಪೂರ್ವ ದೀಕ್ಷಾಂತ ಸಮಾರೋಹ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ೨೦೧೧-೨೦೧೨ನೇ ವರ್ಷದ ಸ್ನಾತಕಪೂರ್ವ ದೀಕ್ಷಾಂತ ಸಮಾರೋಹವು ೩೦ ಜೂನ್ ೨೦೧೨ರ ಶನಿವಾರದ೦ದು ಬೆ೦ಗಳೂರಿನ ಕೆ೦ಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಭವನದಲ್ಲಿ ಮಧ್ಯಾಹ್ನ ೩.೩೦ಕ್ಕೆ ನಡೆಯಿತು.

ವಿಶ್ವವಿದ್ಯಾಲಯದ ಜಾಲತಾಣ ಮತ್ತು ಪರಿಚಯಪುಸ್ತಿಕೆಯ ಅನಾವರಣ

ಮೇ ೧೬, ೨೦೧೨ರಂದು ಬೆಂಗಳೂರಿನ ಅರಮನೆ ರಸ್ತೆಯ ಉನ್ನತ ಶಿಕ್ಷಣ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ. ಕೆ ಎಂ ಕಾವೇರಿಯಪ್ಪನವರು (ಕಾರ್ಯನಿರ್ವಹಣಾನಿರ್ದೇಶಕ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್) ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ, www.ksu.ac.in, ಇದನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಸ್ಥಾಪನೆಯಾದ ಎರಡು ವರ್ಷಗಳಲ್ಲಿ ವಿಶ್ವವಿದ್ಯಾಲಯದ ಹೆಜ್ಜೆ ಗುರುತುಗಳನ್ನು ದಾಖಲಿಸಿರುವ ಪರಿಚಯ … Continue reading

ವಾರ್ಷಿಕೋತ್ಸವ ಮತ್ತು ಗೀತಾ ಜಯಂತಿ

ಮೈಸೂರಿನ ಕೃಷ್ಣಮೂರ್ತಿಪುರದ ಶ್ರೀ ಗಣೇಶ ಸಂಸ್ಕೃತ ಜ್ಯೋತಿಷ ಪಾಠಶಾಲೆಯಲ್ಲಿ ವಾರ್ಷಿಕೋತ್ಸವ ಮತ್ತು ಗೀತಾಜಯಂತ್ಯುತ್ಸವವನ್ನು ಜನವರಿ ೨೨ರಂದು ನಡೆಸಲಾಯಿತು. ಕಾರ್ಯಕ್ರಮವು ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷ ಮತ್ತು ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಪಾಠಶಾಲೆಯ ಮುಖ್ಯೊಪಾಧ್ಯಾಯರಾದ ವಿದ್ವಾನ್ ಕೆ ಪಾರ್ಥನಾರಾಯಣರವರು ಎಲ್ಲರನ್ನು ಸ್ವಾಗತಿಸಿದರು. ಸಂಸ್ಕೃತಶಿಕ್ಷಣನಿರ್ದೇಶನಾಲಯದ ನಿರ್ದೇಶಕರಾದ ಪ್ರೊ. ಶ್ರೀನಿವಾಸ ವರಖೇಡಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಗೃಹಮಂಡಳಿಯ … Continue reading

ಫಲಿತಾಂಶ ಪ್ರಕಟ

ಫೆಬ್ರವರಿ ೨೦೧೨ರಲ್ಲಿ ನಡೆದ ಪ್ರಥಮಾ, ಕಾವ್ಯ, ಸಾಹಿತ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ಕೇಂದ್ರಶಃ ಫಲಿತಾಂಶವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ವಿಶ್ವವಿದ್ಯಾಲಯದ ಜಾಲತಾಣ ಲೋಕಾರ್ಪಣೆ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ, www.ksu.ac.in, ಮೆ ೧೬, ೨೦೧೨ರಂದು ಶ್ರೀ ಸಿದ್ದಯ್ಯ (ಭಾ.ಆ.ಸೇ, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ) ಮತ್ತು ಪ್ರೊ. ಎಸ್ ಸಿ ಶರ್ಮ (ಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ ಹಾಗೂ ಉಪಾಧ್ಯಕ್ಷರು, ಉನ್ನತ ಶಿಕ್ಷಣ ಪರಿಷತ್, ಕರ್ನಾಟಕ ಸರ್ಕಾರ) ಇವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಯಾಗಲಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪರಿಚಯ ಪುಸ್ತಿಕೆಯೂ … Continue reading