ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ, www.ksu.ac.in, ಮೆ ೧೬, ೨೦೧೨ರಂದು ಶ್ರೀ ಸಿದ್ದಯ್ಯ (ಭಾ.ಆ.ಸೇ, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ) ಮತ್ತು ಪ್ರೊ. ಎಸ್ ಸಿ ಶರ್ಮ (ಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ ಹಾಗೂ ಉಪಾಧ್ಯಕ್ಷರು, ಉನ್ನತ ಶಿಕ್ಷಣ ಪರಿಷತ್, ಕರ್ನಾಟಕ ಸರ್ಕಾರ) ಇವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಯಾಗಲಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪರಿಚಯ ಪುಸ್ತಿಕೆಯೂ ಬಿಡುಗಡೆಯಾಗಲಿದೆ.. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸ್ಥಳ – ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭಾಂಗಣ, ಅರಮನೆ ರಸ್ತೆ, ಬೆಂಗಳೂರು
ಸಮಯ – ಬೆಳಿಗ್ಗೆ ೧೧.೩೦