ವಾರ್ಷಿಕೋತ್ಸವ ಮತ್ತು ಗೀತಾ ಜಯಂತಿ

ಮೈಸೂರಿನ ಕೃಷ್ಣಮೂರ್ತಿಪುರದ ಶ್ರೀ ಗಣೇಶ ಸಂಸ್ಕೃತ ಜ್ಯೋತಿಷ ಪಾಠಶಾಲೆಯಲ್ಲಿ ವಾರ್ಷಿಕೋತ್ಸವ ಮತ್ತು ಗೀತಾಜಯಂತ್ಯುತ್ಸವವನ್ನು ಜನವರಿ ೨೨ರಂದು ನಡೆಸಲಾಯಿತು.

ಕಾರ್ಯಕ್ರಮವು ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷ ಮತ್ತು ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಪಾಠಶಾಲೆಯ ಮುಖ್ಯೊಪಾಧ್ಯಾಯರಾದ ವಿದ್ವಾನ್ ಕೆ ಪಾರ್ಥನಾರಾಯಣರವರು ಎಲ್ಲರನ್ನು ಸ್ವಾಗತಿಸಿದರು. ಸಂಸ್ಕೃತಶಿಕ್ಷಣನಿರ್ದೇಶನಾಲಯದ ನಿರ್ದೇಶಕರಾದ ಪ್ರೊ. ಶ್ರೀನಿವಾಸ ವರಖೇಡಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಗೃಹಮಂಡಳಿಯ ಅಧ್ಯಕ್ಷರಾದ ಜಿ ಟಿ ದೇವೇಗೌಡರವರು ಗೀತಾ ಜಯಂತಿಯ ಔಚಿತ್ಯವನ್ನು ಕುರಿತು ಮಾತನಾಡಿ, ಸಂಸ್ಕೃತವು ಎಲ್ಲರ ಮನೆಮಾತಾಗಲಿ ಎಂದು ಹಾರೈಸಿದರು. ಪಾಟಶಾಲೆಗೆ ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ ಸಹಾಯ ಮಾಡುವ ಭರವಸೆಯನ್ನೂ ನೀಡಿದರು.

Comments are closed.