ಬಹುಮಾನಗಳು ಮತ್ತು ದತ್ತಿ ಪುರಸ್ಕಾರಗಳು

ಸಂಸ್ಕೃತ ಪಾಠಶಾಲೆಗಳಿಗೆ ‘ಉತ್ತಮ ಸಾಧನಾ ಬಹುಮಾನ’ ಯೋಜನೆ

ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ ೩೦೦ಕ್ಕೂ ಹೆಚ್ಚು ಅನುದಾನಿತ ಹಾಗೂ ಇತರ ಸಂಸ್ಕೃತ ಪಾಠಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವು ನಡೆಸುವ ಪ್ರಥಮಾ, ಕಾವ್ಯ, ಸಾಹಿತ್ಯ ಪರೀಕ್ಷೆಗಳನ್ನು ಬರೆದು ಉತ್ತೀರ್ಣತೆಯನ್ನು ಪಡೆಯುತ್ತಿದ್ದಾರೆ. ಈ ಪ್ರಸಿದ್ಧ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆಗೈದ ಪಾಠಶಾಲೆಗಳಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಹಮ್ಮಿಕೊ೦ಡಿದೆ.


ನಿಯಮಗಳು –


೧. ಈ ಬಹುಮಾನಕ್ಕೆ ಸಂಸ್ಕೃತ ಪ್ರಸಿದ್ಧ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದ ಅಧಿಕೃತಮಾನ್ಯತೆ ಪಡೆದ ಶಾಲೆಗಳು ಮಾತ್ರ ಅರ್ಹವಾಗಿರುತ್ತವೆ.

೨. ರಾಜ್ಯದ ಪ್ರತಿ ವಲಯ (ಬೆಂಗಳೂರು, ಮೈಸೂರು, ಧಾರವಾಡ, ಚಿತ್ರದುರ್ಗ) ದಲ್ಲಿ ೩ ಶಾಲೆಗಳನ್ನು ಅವುಗಳ ಸಾಧನೆಯ ಆಧಾರದಲ್ಲ್ಲಿ ಆಯ್ಕೆ ಮಾಡಿ ಈ ಬಹುಮಾನವನ್ನು ನೀಡಲಾಗುತ್ತದೆ.

೩. ಈ ಬಹುಮಾನವು ಒಂದು ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

೪. ಪ್ರತಿವರ್ಷದ ಪ್ರಸಿದ್ಧ ಪರೀಕ್ಷೆಗಳಾದ ಪ್ರಥಮಾ, ಕಾವ್ಯ, ಸಾಹಿತ್ಯ ಪರೀಕ್ಷೆಗಳಲ್ಲಿ ಪ್ರತ್ಯೇಕವಾಗಿ ಸಾಧನೆಯನ್ನು ಪರಿಗಣಿಸಲಾಗುತ್ತದೆ.

೫. ಸಮಾನ ಸಾಧನೆ ಮಾಡಿದ ಶಾಲೆಗಳು ಇದ್ದ ಪಕ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಅಧಿಕವಾದ ಶಾಲೆಯನ್ನು ಪರಿಗಣಿಸಲಾಗುತ್ತದೆ ಮತ್ತು ಪ್ರಥಮ, ದ್ವಿತೀಯ ಶ್ರೇಣಿಯ ಸಾಧನೆಯ ಕ್ರಮವನ್ನು ಗಮನಿಸಿ ನಿರ್ಣಯಿಸಲಾಗುತ್ತದೆ.

೬. ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಶಿಫಾರಸ್ಸಿನ ಮೇಲೆ ಸಾಧನ ಪುರಸ್ಕಾರ ಯೋಗ್ಯವಾದ ಪಾಠಶಾಲೆಗಳ ಪಟ್ಟಿಯು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಿಂದ ಅನುಮೋದಿಸಲ್ಪಡುತ್ತದೆ. ಈ ನಿರ್ಣಯವೇ ಅಂತಿಮ.

೭. ರಾಜ್ಯದ ಒಂದು ವಲಯ (ಬೆಂಗಳೂರು, ಮೈಸೂರು, ಧಾರವಾಡ, ಚಿತ್ರದುರ್ಗ)ಕ್ಕೆ ಮೂರು ಬಹುಮಾನಗಳಂತೆ ೪ ವಲಯಗಳಿಗೂ ಬಹುಮಾನಗಳನ್ನು ನೀಡಲಾಗುತ್ತದೆ.

೮. ಈ ಬಹುಮಾನ ವಿತರಣೆ ಸಮಾರಂಭಕ್ಕೆ ಬಹುಮಾನ ಪಡೆದ ಶಾಲೆಯ ಎಲ್ಲ ಅಧ್ಯಾಪಕರನ್ನೂ ಆಹ್ವಾನಿಸಲಾಗುವುದು.2010-2011ನೇ ಸಾಲಿನಲ್ಲಿ ಅತ್ಯುತ್ತಮ ಫಲಿತಾ೦ಶ ಪಡೆದ ಪಾಠಶಾಲೆಗಳು


೨೦೧೧ನೇ ಸಾಲಿನ ಸ್ನಾತಕಪೂರ್ವ ದೀಕ್ಷಾ೦ತ ಸಮಾರೋಹದ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Comments are closed.