ಪುನಶ್ಚೇತನಶಿಬಿರಗಳು

ಕರ್ನಾಟಕ ಸ೦ಸ್ಕೃತ ವಿಶ್ವವಿದ್ಯಾಲಯವು ಸ೦ಸ್ಕೃತ ಪಾಠಶಾಲೆಗಳ ಅಧ್ಯಾಪಕರ ಹಿತದೃಷ್ಟಿಯಿ೦ದ ಪುನಶ್ಚೇತನ ಶಿಬಿರಗಳನ್ನು ಆಯೋಜಿಸುತ್ತದೆ.ಈ ಶಿಬಿರಗಳಲ್ಲಿ ಹಲವಾರು ವಿದ್ವಾ೦ಸರು ತಮ್ಮ ಉಪನ್ಯಾಸಗಳ ಮೂಲಕ ಸ೦ಸ್ಕೃತಾಧ್ಯಾಪನ ಕಲೆಯನ್ನು ಪರಿಚಯಿಸುತ್ತಾರೆ.ಪಾಠ್ಯಪುಸ್ತಕಗಳ ವಿಷಯಗಳನ್ನು ಯುಕ್ತಿಯುಕ್ತವಾಗಿ ಹೊಸ ವಿಧಾನಗಳ ಮೂಲಕ ಬೋಧಿಸುವ ಕ್ರಮಗಳ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿಚಾರವಿಮರ್ಶೆ ಹಾಗೂ ಚರ್ಚೆಗಳನ್ನು ನಡೆಸುತ್ತಾರೆ.ಈ ಶಿಬಿರಗಳಿ೦ದ ಅಧ್ಯಾಪಕರಿಗೆ ತಮ್ಮ ಭೊಧನಾ ಕೌಶಲ್ಯವನ್ನು ಉತ್ತಮವಾಗಿಸಿಕೊಳ್ಳುವ ಅವಕಾಶ ಲಭಿಸುತ್ತದೆ.

ಪುನಶ್ಚೇತನಶಿಬಿರಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Comments are closed.